ಬದಲಾವಣೆ ಜಗದ ನಿಯಮ: ಮಕ್ಕಳ ಭವಿಷ್ಯ, ಉತ್ತಮ ಆರೋಗ್ಯ ಮತ್ತು ಉತ್ತಮ ಸಮಾಜಕ್ಕಾಗಿ ಪ್ರಜಾಕೀಯ ಬೆಂಬಲಿಸಿಬದಲಾವಣೆ ಜಗದ ನಿಯಮ: ಮಕ್ಕಳ ಭವಿಷ್ಯ, ಉತ್ತಮ ಆರೋಗ್ಯ ಮತ್ತು ಉತ್ತಮ ಸಮಾಜಕ್ಕಾಗಿ ಪ್ರಜಾಕೀಯ ಬೆಂಬಲಿಸಿ ಇಂದಿನ ಸಮಾಜವು ಒಂದು ಮಹತ್ವಕಾಂಕ್ಷಿಯ ತಿರುವಿನಲ್ಲಿ ಇದೆ ಪ್ರತಿದಿನ ನಾವು ಹೊಸ ಆಯುಷ್ಕಾರಗಳು ಹೊಸ ತಂತ್ರಜ್ಞಾನಗಳು ಹೊಸ ಕನಸುಗಳ ಬಗ್ಗೆ ಚರ್ಚೆ ಮಾಡುತಿದ್ದೇವೆ ಆದರೆ ಒಂದು ಪ್ರಶ್ನೆ ನಮ್ಮ ಮನಸ್ಸಿನಲ್ಲಿ ಸದಾ ಕಾಡುತ್ತಿದೆ. ನಮ್ಮ ಮಕ್ಕಳ ಭವಿಷ್ಯ ನಿಜವಾಗಿ ಸುರಕ್ಷಿತವಾಗಿದೆ? ಹೀಗಾಗಿ ನಾವು ಬಯಸುವ ಸಮಾಜ ಆರೋಗ್ಯಕರ ಜೀವನ ಕ್ಷಣದ ಗುಣಮಟ್ಟ ಸ್ವಚ್ಛ ಪರಿಸರ ಸತ್ಯ ನಿಷ್ಠೆ ಮತ್ತು ರಾಜಕೀಯ ಇವೆಲ್ಲವೂ ನಮ್ಮ ಮುಂದಿನ ಪೀಳಿಗೆಯ ಜೀವನ ಮತ್ತು ಭವಿಷ್ಯವನ್ನು ನಿರ್ಧರಿಸುತ್ತವೆ.

ಬದಲಾವಣೆ ಜಗದ ನಿಯಮ ಪ್ರಕೃತಿ ಬದಲಾಗುತ್ತದೆ ಕಾಲ ಸಮಯ ಬದಲಾಗುತ್ತದೆ ಜನರ ಜೀವನ ಶೈಲಿ ಉಡುಗೆ ತೊಡುಗೆ ಬದಲಾಗುತ್ತದೆ ನಮ್ಮ ಸುತ್ತಲಿನ ಪರಿಸರವೂ ಬದಲಾಗುತ್ತದೆ ಹಾಗಿದ್ದಾಗ ನಮ್ಮ ಸಮಾಜದ ರಾಜಕೀಯ ಏಕೆ ಬದಲಾಗಬಾರದು
ಇಂದಿನ ಅವಶ್ಯಕತೆಯೂ ಕೇವಲ ಸರ್ಕಾರ ಬದಲಾವಣೆವಲ್ಲ ಸಮಾಜ ಬದಲಾವಣೆ ಈಗ ಈ ಬದಲಾವಣೆಗಾಗಿ ಕೈಜೋಡಿಸಬೇಕಾದ ಸಮಯ ಬಂದಿದೆ ಬನ್ನಿ ಪ್ರಜಾಕೀಯ ಜೊತೆ ಕೈಜೋಡಿಸಿ ಉತ್ತಮ ಸಮಾಜವನ್ನು ನಿರ್ಮಿಸೋಣ ಎಂದು ಹೇಳುತ್ತಾರ ಬನ್ನಿ ಕೈ ಜೋಡಿಸಿ ಪ್ರಜಾಕೀಯ ಜೊತೆಗೆ ಉತ್ತಮ ಸಮಾಜವನ್ನು ನಿರ್ಮಿಸೋಣ
ಪ್ರಜಾಕೀಯ ಎಂದರೆ ಏನು ಗೊತ್ತಾ?
ಪ್ರಜಾಕೀಯ ಎಂಬುವುದು ಕೇವಲ ಒಂದು ರಾಜಕೀಯ ಪರಿಕಲ್ಪನೆ ಅಲ್ಲ ಇದು ಜನರಿಂದ ಜನರಿಗಾಗಿ ಜನರೊಂದಿಗೆ ನಡೆಯುವ ಒಂದು ಸಾಮಾಜಿಕ ಚಳುವಳಿ ಇದು ಹುದ್ದೆಗಾಗಿ ನಡೆಯುವ ರಾಜಕೀಯ ಹೋರಾಟವಲ್ಲ ಇದು ಜನರ ಜೀವನ ಮಟ್ಟವನ್ನು ಸುಧಾರಿಸುವ ಹೊಣೆಗಾರಿಕೆ ದಾರಿ
ಪ್ರಜಾಕೀಯದ ಮೂಲಭೂತ ಉದ್ದೇಶಗಳು:
- ಮಕ್ಕಳಿಗೆ ಉತ್ತಮವಾದ ಶಿಕ್ಷಣವನ್ನು ಕೊಡಿಸುವುದು
- ಪ್ರತಿಯೊಬ್ಬರಿಗೂ ಆರೋಗ್ಯಕರ ಬದುಕು ಕೊಡಿಸುವುದು
- ಭ್ರಷ್ಟಾಚಾರ ರಹಿತ ಆಡಳಿತ ತರುವುದು
- ಸ್ವಚ್ಛ ಮತ್ತು ಸುರಕ್ಷಿತ ಸಮಾಜವನ್ನು ರೂಪಿಸುವುದು
- ಎಲ್ಲರಿಗೂ ಸಮಾನ ಅವಕಾಶಗಳ ಭಾರತವನ್ನು ನಿರ್ಮಿಸುವುದು
ಇಂದಿನ ರಾಜಕೀಯದಲ್ಲಿ ರಾಜಕಾರಣಿಗಳು ಹಲವರು ಆನೆ ಭಾಷೆ ಮಾತು ಕೊಡುತ್ತಾರೆಆದರೆ ಜನರು ಬಯಸುವುದು ಮಾತು ಆನೆ ಭಾಷೆಯನಲ್ಲ ಅವರು ಬಯಸುವುದು ಬದಲಾವಣೆ ನಿಷ್ಠೆ ಮತ್ತು ಕಾರ್ಯ ಪ್ರವೃತ್ತಿ ಮತ್ತು ಕೆಲಸ ಬದಲಾವಣೆ, ಅಲ್ಲಿಯೇ ಪ್ರಜಾಕೀಯ ವಿಭಿನ್ನವಾಗಿ ಕಾಣಿಸುತ್ತದೆ.ಮಕ್ಕಳ ಭವಿಷ್ಯಕ್ಕಾಗಿ ಇಂದು ತೆಗೆದುಕೊಳ್ಳುವ ನಿರ್ಧಾರವೇ ನಾಳೆ ದೇಶವನ್ನು ರೂಪಿಸುತ್ತದೆ ಎಂದು ತಿಳಿಯಬೇಕು ಒಂದು ದೇಶದ ಭವಿಷ್ಯ ನಿಂತಿರುವುದು ಆದೇಶದಲ್ಲಿ ಇರುವ ರಸ್ತೆಗಳು ಕಟ್ಟಡಗಳು ದೊಡ್ಡ ದೊಡ್ಡ ಯೋಜನೆ ಗಳಿಂದ ಆ ದೇಶದ ಭವಿಷ್ಯ ಅಡಗಿರುವುದು ಮಕ್ಕಳ ನಗು ಮುಖದಲ್ಲಿ ಅವರ ಶಿಕ್ಷಣದಲ್ಲಿ ಅವರ ಯೋಗ್ಯತೆಯಲ್ಲಿ ಆರೋಗ್ಯದಲ್ಲಿ ಅವರ ಕನಸುಗಳಲ್ಲಿ ಅಡಕವಾಗಿದೆ

ಇಂದು ಅನೇಕ ಕುಟುಂಬಗಳು ಎದುರಿಸುತ್ತಿರುವ ದೊಡ್ಡ ಸಮಸ್ಯೆಗಳು
- ಗುಣಮಟ್ಟದ ಶಿಕ್ಷಣದ ಕೊರತೆ
- ಆರೋಗ್ಯ ಸೇವೆಗಳ ಅಲಭ್ಯತೆ
- ಮಾಲಿನ್ಯ ಮತ್ತು ಅಸ್ವಚ್ಛ ಪರಿಸರ
- ಸುರಕ್ಷಿತ ಆಟದ ಮೈದಾನಗಳ ಕೊರತೆ
- ಮಾನಸಿಕ ಒತ್ತಡ ಮತ್ತು ಅಸ್ವಸ್ಥ ಜೀವನಶೈಲಿ
ಒಬ್ಬ ಮಗು ಆರೋಗ್ಯಕರ ಪರಿಸರದಲ್ಲಿ ಬೆಳೆದರೆ ಅದು ಕೇವಲ ಆ ಮಗುವಿನ ಜೀವನವನ್ನೇ ಅಲ್ಲ ಅದು ಒಂದು ಕುಟುಂಬದ ಒಂದು ಸಮಾಜ ಸಮುದಾಯದ ಒಂದು ರಾಜ್ಯದ ಒಂದು ದೇಶದ ಭವಿಷ್ಯವನ್ನೇ ಬದಲಾಯಿಸಬಹುದು ಎಂದು ನಿಮಗೆ ತಿಳಿಯಿರಲಿ
ಆದ್ದರಿಂದ ನಾವು ಈಗ ರಾಜಕೀಯವನ್ನು ಕೇವಲ ಚುನಾವಣೆ ದೃಷ್ಟಿಗಳಿಂದ ನೋಡದೆ ನಮ್ಮ ಮಕ್ಕಳ ಭವಿಷ್ಯದ ದೃಷ್ಟಿಯಿಂದ ನೋಡಬೇಕು ಪ್ರಜಾಕೀಯ ಬೆಂಬಲಿಸುವುದು ಎಂದರೆ ಮಕ್ಕಳ ಕನಸುಗಳಿಗೆ ಬೆಂಬಲ ನೀಡುವುದು ಎಂದರ್ಥಉತ್ತಮ ಆರೋಗ್ಯವೇ ಉತ್ತಮ ಸಮಾಜದ ಅಡಿಪಾಯ
ಇಂದು ಜನರ ಜೀವನದಲ್ಲಿ ಆರೋಗ್ಯದ ಪ್ರಶ್ನೆ ಅತ್ಯಂತ ಗಂಭೀರವಾಗಿದೆ ಆಹಾರದಲ್ಲಿ ಪೌಷ್ಟಿಕತೆಯ ಕಡಿಮೆಯಾಗುತ್ತಿದೆ ವಾಯು ಮಾಲಿನ್ಯ ಹೆಚ್ಚಾಗುತ್ತಿದೆ ಮಾನಸಿಕ ಒತ್ತಡ ಏರಿಕೆಯಾಗುತ್ತದೆ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಮೂಲಭೂತ ಆರೋಗ್ಯ ಸೇವೆಗಳು ಇನ್ನೂ ಅಪೂರ್ತಿಯಾಗಿವೆ ಮತ್ತು ಜನರ ಜೀವನ ಮಟ್ಟ ಸುಧಾರಣೆ ಆಗುತ್ತಿಲ್ಲ
- ಉತ್ತಮ ಆರೋಗ್ಯ ಇಲ್ಲದೆ
- ಉತ್ತಮ ಶಿಕ್ಷಣ ಸಾಧ್ಯವಿಲ್ಲ
- ಉತ್ತಮ ಉದ್ಯೋಗ ಸಾಧ್ಯವಿಲ್ಲ
- ಸಂತೋಷದ ಕುಟುಂಬ ಜೀವನ ಸಾಧ್ಯವಿಲ್ಲ
- ಬಲಿಷ್ಠ ಸಮಾಜ ನಿರ್ಮಾಣವೂ ಸಾಧ್ಯವಿಲ್ಲ
ಆದ್ದರಿಂದ ರಾಜಕೀಯದಲ್ಲಿ ಆರೋಗ್ಯಕ್ಕೆ ಮೊದಲ ಆದ್ಯತೆ ಸಿಗಬೇಕು ಆದರೆ ವಾಸ್ತವದಲ್ಲಿ ಏನು ನಡೆಯುತ್ತಿದೆ ನಿಮಗೆ ಗೊತ್ತಾ ಬಹುಸಾರಿ ಜನರ ಆರೋಗ್ಯಕ್ಕಿಂತ ಹೆಚ್ಚು ಪ್ರಾಮುಖ್ಯತೆ ಪ್ರಚಾರಕ್ಕೆ ಸಿಗುತ್ತಿದೆ ಎಂದು ನಮಗೆ ತಿಳಿದೇ ಇಲ್ಲ ಬದಲಾವಣೆ ಜಗದ ನಿಯಮ: ಮಕ್ಕಳ ಭವಿಷ್ಯ, ಉತ್ತಮ ಆರೋಗ್ಯ ಮತ್ತು ಉತ್ತಮ ಸಮಾಜಕ್ಕಾಗಿ ಪ್ರಜಾಕೀಯ ಬೆಂಬಲಿಸಿ
ಇಲ್ಲಿ ನಮ್ಮ ಚಿಂತನೆಗಳು ಬದಲಾಗಬೇಕು ನಾವು ಬೆಂಬಲಿಸಬೇಕಾದದ್ದು
- ಉತ್ತಮ ಸರ್ಕಾರಿ ಆಸ್ಪತ್ರೆಗಳು
- ಗ್ರಾಮ ಮಟ್ಟದ ಆರೋಗ್ಯ ಸೇವೆಗಳು
- ಮಕ್ಕಳ ಪೌಷ್ಠಿಕತೆ ಕಾರ್ಯಕ್ರಮಗಳು
- ಸ್ವಚ್ಛ ಕುಡಿಯುವ ನೀರು
- ಪರಿಸರ ಸ್ನೇಹಿ ಜೀವನಶೈಲಿ
- ಆರೋಗ್ಯ ಜಾಗೃತಿ
ಪ್ರಜಾಕೀಯದಂತಹ ಚಳುವಳಿಗಳು ಜನಕೇಂದ್ರಿತ ಆರೋಗ್ಯಗಳ ನೀತಿಗಳನ್ನು ಬೆಂಬಲಿಸುತ್ತವೆ ಇದು ಕೇವಲ ರಾಜಕೀಯ ಮಾತಲ್ಲ ಬದುಕಿನ ಅಗತ್ಯತೆ ಎಂದು ತಿಳಿಯಬೇಕು ನಾವು
ನಾವು ಉತ್ತಮ ಸಮಾಜವನ್ನು ಕಟ್ಟಲು ಒಬ್ಬೊಬ್ಬ ನಾಗರಿಕನ ಪಾತ್ರ ಬಹಳ ಮುಖ್ಯವಾಗಿದೆ
ನಾವು ಎಲ್ಲರೂ ಒಂದಾಗಿ ಒಂದೇ ಪ್ರಶ್ನೆಯನ್ನು ಕೇಳಿಕೊಳ್ಳಬೇಕು ಸಮಾಜ ಕೆಟ್ಟಿದೆ ಎಂದು ದೂರುವುದು ಸಾಕು ಇಲ್ಲವೇ ಸಮಾಜ ಬದಲಾಯಿಸಲು ನಾವು ಏನು ಮಾಡಬೇಕು ಎಂದು ಕೇಳಿಕೊಳ್ಳಬೇಕು? ಉತ್ತಮ ಸಮಾಜ ನಿರ್ಮಾಣ ಸರಕಾರದಿಂದ ಮಾತ್ರ ಸಾಧ್ಯವಿಲ್ಲ ಅದಕ್ಕೆ ಪ್ರತಿಯೊಬ್ಬ ನಾಗರಿಕ ಪ್ರತಿಯೊಬ್ಬ ಜನರು ಕೂಡ ಕೈಜೋಡಿಸಬೇಕಾಗಿದೆ.
ಒಂದು ಉತ್ತಮವಾದಂತ ಸಮಾಜದ ಲಕ್ಷಣಗಳು:
- ಸತ್ಯನಿಷ್ಠ ನಾಯಕತ್ವ
- ಶಿಕ್ಷಣ ಪಡೆದ ಯುವಜನತೆ
- ಆರೋಗ್ಯಕರ ಕುಟುಂಬ ವ್ಯವಸ್ಥೆ
- ಮಹಿಳೆಯರಿಗೆ ಗೌರವ ಮತ್ತು ಭದ್ರತೆ
- ಮಕ್ಕಳಿಗೆ ಸುರಕ್ಷಿತ ವಾತಾವರಣ
- ಸ್ವಚ್ಛತೆ ಮತ್ತು ಪರಿಸರ ಕಾಳಜಿ
- ಜಾತಿ, ಧರ್ಮ, ಭಾಷೆ ಮೀರಿದ ಮಾನವೀಯತೆ
ಪ್ರಜಾಕೀಯ ಮೂಲ ಚಿಂತನೆ ಕೂಡ ಇದೇ ಆಗಿದೆ, ಜನರ ಕೈಯಲ್ಲಿ ಸಮಾಜ ನಿರ್ಮಾಣ ಶಕ್ತಿ ಇದೆ ಎಂಬುದನ್ನು ಎನ್ನುವ ನಂಬಿಕೆಯನ್ನು ಇದು ಬಲಪಡಿಸುತ್ತದೆ. ಬದಲಾವಣೆ ಎಂದರೆ ಕೇವಲ ಸರ್ಕಾರ ಬದಲಿಸುವುದು ಅಲ್ಲ.
- ನಮ್ಮ ಮನೋಭಾವ ಬದಲಿಸುವುದು
- ನಮ್ಮ ಹೊಣೆಗಾರಿಕೆ ಅರಿಯುವುದು
- ನಮ್ಮ ಮಕ್ಕಳಿಗಾಗಿ ಉತ್ತಮ ಆಯ್ಕೆ ಮಾಡುವುದು
ಯಾಕೆ ಈಗಲೇ ಪ್ರಜಾಕೀಯ ಬೆಂಬಲಿಸಬೇಕು?
ಕಾರಣ, ನಾಳೆಗೆ ಕಾಯುವಷ್ಟು ಸಮಯ ನಮ್ಮ ಬಳಿ ಇಲ್ಲ.
ಇಂದು ನಾವು ಮೌನವಾಗಿದ್ದರೆ, ನಾಳೆ ನಮ್ಮ ಮಕ್ಕಳು ಅದೇ ಸಮಸ್ಯೆಗಳನ್ನು ಮತ್ತೆ ಎದುರಿಸಬೇಕಾಗುತ್ತದೆ.ಇಂದು ನಮ್ಮ ಸುತ್ತಲೂ ನಾವು ನೋಡುವ ಸಮಸ್ಯೆಗಳು:
- ರಾಜಕೀಯದಲ್ಲಿ ನಂಬಿಕೆ ಕುಸಿತ
- ಭ್ರಷ್ಟಾಚಾರ
- ಸಾರ್ವಜನಿಕ ಆರೋಗ್ಯದ ನಿರ್ಲಕ್ಷ್ಯ
- ಯುವಕರಲ್ಲಿ ನಿರುದ್ಯೋಗ
- ಶಿಕ್ಷಣದಲ್ಲಿ ಅಸಮಾನತೆ
- ಸಮಾಜದಲ್ಲಿ ವಿಭಜನೆ
ಇಂತಹ ಪರಿಸ್ಥಿತಿಯಲ್ಲಿ ಜನಪರ ಚಿಂತನೆ ಹೊಂದಿರುವ ವ್ಯವಸ್ಥೆಗೆ ಬೆಂಬಲ ನೀಡುವುದು ಅಗತ್ಯ.
ಪ್ರಜಾಕೀಯದ ಪ್ರಮುಖ ಲಕ್ಷಣಗಳು
- ಜನರೇ ಹೈಕಮಾಂಡ್ ಆಗಿರುತ್ತಾರೆ ಎಲ್ಲ ರಾಜಕೀಯ ನಿರ್ಣಯಗಳನ್ನು ಸಾಮಾನ್ಯ ಜನರ ತೆಗೆದುಕೊಳ್ಳುತ್ತಾರೆ
- ಕ್ಯಾಶ್ ಲೆಸ್ ಇಲ್ಲಿ ನಡೆಯುವ ಚುನಾವಣೆ ಗಳಿಗೆ ಯಾವುದೇ ಹಣವನ್ನು ಖರ್ಚು ಮಾಡಲಾಗುವುದಿಲ್ಲ
- ಪಾರದರ್ಶಕತೆ ಆಡಳಿತ ಒಂದು ಸರಕಾರದ ಸೇವೆಯಾಗಿ ಪರಿಗಣಿಸಲ್ಪಡುತ್ತದೆ ಮತ್ತೆ ಚುನಾವಣಾ ಪ್ರತಿನಿಧಿಗಳು ಸಾರ್ವಜನಿಕರಿಗೆ ನೇರವಾಗಿ ಸಿಗುತ್ತಾರೆ
- ಆಯ್ಕೆ ಮತ್ತು ತಿದ್ದುಪಡಿ ಅಭ್ಯರ್ಥಿಗಳನ್ನು ಅರ್ಹತೆಯ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ ಮತ್ತು ಅವರ ಕೆಲಸ ಸರಿಯಾಗಿ ಇಲ್ಲದಿದ್ದರೆ ಜನರೇ ಅವರನ್ನು ತೆಗೆದುಹಾಕುವಂತಹ ಹಕ್ಕು ಇರುತ್ತದೆ
- ಉತ್ತಮ ಪ್ರಜಾಕೀಯ ಪಕ್ಷ ಇದು ಉಪೇಂದ್ರ ಅವರು ಸ್ಥಾಪಿಸಿದ ಪ್ರಾದೇಶಿಕ ಪಕ್ಷವಾಗಿದೆ ಈ ಪಕ್ಷವು ಶಿಕ್ಷಣ ಆರೋಗ್ಯ ಆಡಳಿತ ಸುಧಾರಣೆ ಹೆಚ್ಚಿನ ಆಸಕ್ತಿಯನ್ನು ಕೊಡುತ್ತದೆ
-
ಸರಳವಾಗಿ ಹೇಳಬೇಕೆಂದರೆ ಪ್ರಜಾಕೀಯ ಎಂದರೆ ನಾಯಕರುಗಳು ಇಲ್ಲದೆ ಪ್ರಜೆಗಳೇ ಸೇವೆ ಮಾಡುವ ವ್ಯವಸ್ಥೆಯಾಗಿದೆ
ಪ್ರಜಾಕೀಯ ಬೆಂಬಲಿಸುವುದು ಎಂದರೆ
- ಭವಿಷ್ಯವನ್ನು ಆಯ್ಕೆ ಮಾಡುವುದು
- ಆರೋಗ್ಯಕರ ಸಮಾಜಕ್ಕೆ ಬೆಂಬಲ ನೀಡುವುದು
- ಮಕ್ಕಳಿಗೆ ಉತ್ತಮ ನಾಳೆ ನೀಡುವುದು
- ಜವಾಬ್ದಾರಿಯುತ ನಾಗರಿಕನಾಗಿ ನಿಲ್ಲುವುದು
ಇದು ರಾಜಕೀಯ ಲಾಭಕ್ಕಾಗಿ ಮಾಡುವ ಬೆಂಬಲವಲ್ಲ. ಇದು ಪೀಳಿಗೆಯ ಭವಿಷ್ಯಕ್ಕಾಗಿ ಮಾಡುವ ಹೂಡಿಕೆ. ಯುವಕರು ಮುಂದೆ ಬಂದರೆ ಬದಲಾವಣೆ ಖಚಿತ ಯಾವುದೇ ದೇಶದ ನಿಜವಾದ ಶಕ್ತಿ ಅದರ ಯುವಜನತೆ. ಇಂದಿನ ಯುವಕರು ಕೇವಲ ಉದ್ಯೋಗ ಹುಡುಕುವವರಾಗಿರಬಾರದು; ಅವರು ಸಮಾಜ ರೂಪಿಸುವವರಾಗಬೇಕು. ಪ್ರಜಾಕೀಯದಂತಹ ಚಿಂತನೆಗಳಿಗೆ ಯುವಕರ ಬೆಂಬಲ ಸಿಕ್ಕರೆ
- ಹೊಸ ನಾಯಕತ್ವ ಹುಟ್ಟುತ್ತದೆ
- ನಿಷ್ಠೆಯ ರಾಜಕೀಯ ಬಲವಾಗುತ್ತದೆ
- ಸಮಾಜಮುಖಿ ಯೋಜನೆಗಳು ಬೆಳೆಯುತ್ತವೆ
- ಗ್ರಾಮದಿಂದ ನಗರವರೆಗೂ ಬದಲಾವಣೆ ಸಾಧ್ಯವಾಗುತ್ತದೆ
ಪ್ರಜಾಕೀಯದ ಶಿಸ್ತು ಪಾಲನೆಗಳು
1) ಪ್ರಜಾಕೀಯದಲ್ಲಿ ಯಾವುದೇ ರಾಜಕೀಯ ಪಕ್ಷಗಳು ರಾಜಕೀಯ ವ್ಯಕ್ತಿಗಳ ವಿಷಯ ವಿಮರ್ಶೆನೆ ಅವರ ದೋಷಗಳನ್ನು ಮತ್ತು ಅವರನ್ನು ಹೀಯಾಳಿಸುವಂತಿಲ್ಲ
2) ಪ್ರಜಾಕೀಯದಲ್ಲಿ ಎಲ್ಲಾ ಜನಸಾಮಾನ್ಯರನ್ನು ಮತ್ತು ಪ್ರಜೆಗಳನ್ನು ಒಂದೇ ತರನಾಗಿ ನೋಡುವುದು
3) ಪ್ರಜಾಕೀಯ ಪಕ್ಷದಲ್ಲಿ ಯಾವುದೇ ಬೈಗುಳ ಅಸಭ್ಯ ಭಾಷೆಗಳನ್ನು ಬಳಸುವಂತಿಲ್ಲ
4) 18 ವಯಸ್ಸಿನ ಕೆಳಗಿನ ಮಕ್ಕಳನ್ನು ಪ್ರಜಾಕೀಯ ಪಕ್ಷದಲ್ಲಿ ಯಾವುದೇ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತಿಲ್ಲ ಮತ್ತು ಉಪಯೋಗಿಸಿಕೊಳ್ಳುವಂತಿಲ್ಲ
5) ಪ್ರಜಾಕೀಯದಲ್ಲಿ ಪ್ರಜೆಗಳನ್ನು ಸಂಪರ್ಕಿಸಲು ಆಗುವಂತ ಸಾರಿಗೆ ಖರ್ಚು ಮತ್ತು ಊಟದ ಖರ್ಚುಗಳನ್ನು ಹೀಗೆ ಸಣ್ಣ ಪುಟ್ಟ ಖರ್ಚುಗಳನ್ನು ಬಿಟ್ಟರೆ ಬೇರೆ ಯಾವುದೇ ಖರ್ಚುಗಳನ್ನು ಮಾಡುವಂತಿಲ್ಲ
6) ಪ್ರಜಾಕೀಯದಲ್ಲಿ ಧರ್ಮ ಜಾತಿ ಪಂಗಡ ಹಾಗೂ ಸಂಸ್ಕೃತಿ ಎಂಬುದನ್ನು ಮಾತನಾಡುವಂತಿಲ್ಲ ಮತ್ತು ದೋಷಿಸುವಂತಿಲ್ಲ
7) ಯಾವುದೇ ಖಾಸಗಿಯ ವೈಯಕ್ತಿಕ ಆಡಿಯೋ ವಿಡಿಯೋಗಳನ್ನು ಖಂಡಿತವಾಗಿಯೂ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವಂತಿಲ್ಲ
8) ಪ್ರಜಾಕೀಯದ ಸಾಮಾಜಿಕ ಜಾಲತಾಣದಲ್ಲಿ ಶುಭೋದಯ ಶುಭರಾತ್ರಿ ಹಬ್ಬ ಹರಿದಿನಗಳ ಶುಭಾಶಯಗಳನ್ನ ಪೋಸ್ಟ್ ಮಾಡುವಂತಿಲ್ಲ
ಯುವಕರು ಕೇವಲ ಸೋಶಿಯಲ್ ಮೀಡಿಯಾದಲ್ಲಿ ಅಭಿಪ್ರಾಯ ಹೇಳುವುದಷ್ಟೇ ಅಲ್ಲ, ನೆಲಮಟ್ಟದಲ್ಲಿ ಕೆಲಸ ಮಾಡುವ ಚಳುವಳಿಗಳೊಂದಿಗೆ ಕೈಜೋಡಿಸಬೇಕು. ಬದಲಾವಣೆ ಬರಬೇಕು ಅಂದ್ರೆ, ಮೊದಲು ನಾವು ಬದಲಾಗಬೇಕು. ಅದೇ ಬದಲಾವಣೆಯ ಮೊದಲ ಹೆಜ್ಜೆ. ಕುಟುಂಬದಿಂದಲೇ ಪ್ರಾರಂಭವಾಗುವ ಸಮಾಜ ಕ್ರಾಂತಿ ಒಂದು ಒಳ್ಳೆಯ ಸಮಾಜದ ಆರಂಭ ಒಂದು ಒಳ್ಳೆಯ ಕುಟುಂಬದಿಂದ. ಮಕ್ಕಳಿಗೆ ನಾವು ನೀಡುವ ಮೌಲ್ಯಗಳು, ಜೀವನಶೈಲಿ, ಶಿಸ್ತಿನ ಬುದ್ಧಿ, ಸಾಮಾಜಿಕ ಹೊಣೆಗಾರಿಕೆ — ಇವೆಲ್ಲವೂ ದೇಶದ ಭವಿಷ್ಯವನ್ನು ರೂಪಿಸುತ್ತವೆ. ನಾವು ನಮ್ಮ ಮಕ್ಕಳಿಗೆ
ಹೇಳಬೇಕಾದುದು:
- ಸತ್ಯವಾಗಿ ಬದುಕು
- ಆರೋಗ್ಯವನ್ನು ಕಾಪಾಡು
- ಸಮಾಜದ ಬಗ್ಗೆ ಕಾಳಜಿ ಇಟ್ಟುಕೋ
- ಇತರರ ನೋವನ್ನು ಅರ್ಥಮಾಡಿಕೋ
- ಒಳ್ಳೆಯ ನಾಯಕತ್ವವನ್ನು ಬೆಂಬಲಿಸು
ಪ್ರಜಾಕೀಯದಂತಹ ಚಿಂತನೆಗಳು ಈ ಮೌಲ್ಯಗಳನ್ನು ಸಮಾಜದಲ್ಲಿ ಬಿತ್ತುತ್ತವೆ.ಅದರ ಕಾರಣದಿಂದಲೇ ಇದು ಕೇವಲ ರಾಜಕೀಯವಲ್ಲ ಒಂದು ಸಾಮಾಜಿಕ ಜಾಗೃತಿ. ಬನ್ನಿ, ಕೈ ಜೋಡಿಸಿ — ಉತ್ತಮ ನಾಳೆ ನಿರ್ಮಿಸೋಣ ಇಂದು ನಮ್ಮ ಮುಂದೆ ಎರಡು ದಾರಿಗಳಿವೆ. ಒಂದು — ಹಳೆಯದೇ ಆಗಿರುವ ವ್ಯವಸ್ಥೆಯನ್ನು ನೋಡುತ್ತಾ ಮೌನವಾಗಿರುವುದು. ಇನ್ನೊಂದು — ಬದಲಾವಣೆಗೆ ಬೆಂಬಲ ನೀಡಿ, ಉತ್ತಮ ಸಮಾಜಕ್ಕಾಗಿ ಹೆಜ್ಜೆ ಇಡುವುದು. ನಮ್ಮ ಮಕ್ಕಳ ಆರೋಗ್ಯ, ಅವರ ಶಿಕ್ಷಣ, ಅವರ ಸುರಕ್ಷತೆ, ಅವರ ಭವಿಷ್ಯ — ಇವೆಲ್ಲವೂ ಇಂದು ನಾವು ತೆಗೆದುಕೊಳ್ಳುವ ನಿರ್ಧಾರಗಳ ಮೇಲೆ ನಿಂತಿವೆ. ಹಾಗಾಗಿ ಈ ಕ್ಷಣವೇ ಸರಿಯಾದ ಸಮಯ.ಬದಲಾವಣೆ ಜಗದ ನಿಯಮ: ಮಕ್ಕಳ ಭವಿಷ್ಯ, ಉತ್ತಮ ಆರೋಗ್ಯ ಮತ್ತು ಉತ್ತಮ ಸಮಾಜಕ್ಕಾಗಿ ಪ್ರಜಾಕೀಯ ಬೆಂಬಲಿಸಿ
ಬನ್ನಿ, ಕೈ ಜೋಡಿಸಿ.
ಮಕ್ಕಳ ಭವಿಷ್ಯಕ್ಕಾಗಿ ಕೈ ಜೋಡಿಸಿ.
ಉತ್ತಮ ಆರೋಗ್ಯಕ್ಕಾಗಿ ಕೈ ಜೋಡಿಸಿ.
ಉತ್ತಮ ಸಮಾಜಕ್ಕಾಗಿ ಕೈ ಜೋಡಿಸಿ.
ಪ್ರಜಾಕೀಯ ಬೆಂಬಲಿಸಿ.
ಇದು ಕೇವಲ ಒಂದು ಘೋಷಣೆ ಅಲ್ಲ.
ಇದು ಒಂದು ಸಂಕಲ್ಪ.
ಇದು ಒಂದು ಹೊಣೆಗಾರಿಕೆ.
ಇದು ಒಂದು ಹೊಸ ಪ್ರಾರಂಭ.
ಜೈ ಪ್ರಜಾಕೀಯ!
https://kannadanewsguru.com/10-amazing-health-benefits-of-eating-carret/
1 thought on “ಬದಲಾವಣೆ ಜಗದ ನಿಯಮ: ಮಕ್ಕಳ ಭವಿಷ್ಯ, ಉತ್ತಮ ಆರೋಗ್ಯ ಮತ್ತು ಉತ್ತಮ ಸಮಾಜಕ್ಕಾಗಿ ಪ್ರಜಾಕೀಯ ಬೆಂಬಲಿಸಿ 2”