Telegram Join My Telegram   WhatsApp Join My WhatsApp

ಪ್ರತಿ ದಿನ ಗಜ್ಜರಿ ತಿನ್ನುವುದರಿಂದ ಆಗುವ 10 ಅದ್ಭುತ ಆರೋಗ್ಯ ಲಾಭಗಳು

ಪ್ರತಿ ದಿನ ಗಜ್ಜರಿ ತಿನ್ನುವುದರಿಂದ ಆಗುವ 10 ಅದ್ಭುತ ಆರೋಗ್ಯ ಲಾಭಗಳು

ಪ್ರತಿ ದಿನ ಗಜ್ಜರಿ ತಿನ್ನಿ, ಆರೋಗ್ಯವನ್ನು ನಿಮ್ಮ ಕೈಯಲ್ಲಿ ಹಿಡಿಯಿರಿ! – ದಿನನಿತ್ಯ ಗಜ್ಜರಿ ತಿನ್ನುವುದರಿಂದಾಗುವ ಅದ್ಭುತ ಉಪಯೋಗಗಳು

ಇಂದಿನ ವೇಗದ ಜೀವನದಲ್ಲಿ ಆರೋಗ್ಯಕರ ಆಹಾರ ಪದ್ಧತಿ ಅಳವಡಿಸಿಕೊಳ್ಳುವುದು ಅತಿ ಮುಖ್ಯವಾಗಿದೆ. ಹಲವರು ದುಬಾರಿ ಡಯಟ್‌ಗಳು, ಸಪ್ಲಿಮೆಂಟ್‌ಗಳು, ವಿಶೇಷ ಆಹಾರಗಳ ಕಡೆ ಓಡುತ್ತಾರೆ. ಆದರೆ ನಮ್ಮ ಅಡುಗೆಮನೆಯಲ್ಲಿ ಸುಲಭವಾಗಿ ಸಿಗುವ ಕೆಲವು ಸಾಮಾನ್ಯ ಆಹಾರಗಳಲ್ಲೇ ಅದ್ಭುತ ಆರೋಗ್ಯ ರಹಸ್ಯಗಳು ಅಡಗಿವೆ. ಅಂತಹ ಸೂಪರ್‌ಫುಡ್‌ಗಳಲ್ಲಿ ಒಂದೇ “ಗಜ್ಜರಿ” ಕಡಿಮೆ ಬೆಲೆಯಲ್ಲಿ ಸಿಗುವಂತಹ ರುಚಿಕರವಾದ ಪೌಷ್ಟಿಕಾಂಶಗಳಿಂದ ತುಂಬಿರುವಂತಹ ತರಕಾರಿಯೇ ಗಜ್ಜರಿಯಾಗಿದೆ. ಗಜ್ಜರಿಯನ್ನು ಆರೋಗ್ಯದ ಗೆಳೆಯ ಎಂದು ಕರೆಯುತ್ತಾರೆ ದಿನನಿತ್ಯದ ಆಹಾರದಲ್ಲಿ ಗಜ್ಜರಿಯನ್ನು ತಿನ್ನುವುದರಿಂದ ಕಣ್ಣುಗಳ ಆರೋಗ್ಯದಿಂದ ಹಿಡಿದು ಚರ್ಮದ ಕಾಂತಿಯವರೆಗೆ ಹೃದಯದ ಆರೋಗ್ಯದಿಂದ ಹಿಡಿದು ಜೀರ್ಣಕ್ರಿಯೆವರೆಗೆ ಅನೇಕ ಪ್ರಯೋಜನಗಳು ಗಜ್ಜರಿ ಇಂದ ಇದೆ.

ಪ್ರತಿ ದಿನ ಗಜ್ಜರಿ ತಿನ್ನುವುದರಿಂದ ಏನೆಲ್ಲಾ ಲಾಭಗಳಿವೆ? 

ಬನ್ನಿ, ವಿವರವಾಗಿ ತಿಳಿಯೋಣ.

ಗಜ್ಜರಿ ಎಂದರೆ ಏನು?

ಗಜ್ಜರಿ ಒಂದು ಬೇರು ತರಕಾರಿಯಾಗಿದ್ದು ಸಾಮಾನ್ಯವಾಗಿ ಕಿತ್ತಳೆ ಬಣ್ಣದಲ್ಲಿ ಕಾಣಿಸುತ್ತದೆ ಆದರೆ ಕೆಂಪು ನೆರಳೆ ಹಳದಿ ಬಣ್ಣದಲ್ಲಿ ಕಂಡುಬರುತ್ತದೆ ಇದರಲ್ಲಿ ಬಹಳಷ್ಟು ವಿಟಮಿನ್ ಗಳು ಕಂಡುಬರುತ್ತವೆ ಅವು ಯಾವು ಎಂದರೆ ವಿಟಮಿನ್ A ವಿಟಮಿನ್ K ವಿಟಮಿನ್ C ಮತ್ತು ಫೈಬರ್ ಪೊಟ್ಯಾಶಿಯಂ ಆಂಟಿ ಆಕ್ಸಿಡೆಂಟ್ ಮುಂತಾದ ಪೋಷಕಾಂಶಗಳು ಗಜ್ಜರಿಯಲ್ಲಿ ಸಮೃದ್ಧಿ ಮತ್ತು ಸಂಪತ್ ಭರಿತವಾಗಿವೆ ಇವೆ

ಗಜ್ಜರಿಯಲ್ಲಿ ಮುಖ್ಯವಾಗಿ ಕಂಡುಬರುವಂತಹ ಬೀಟಾ ಕ್ಯಾರೋಟಿನ್ ಎಂಬ ಅಂಶವು ನಮ್ಮ ದೇಶದಲ್ಲಿ ಸೇರಿ ಅದು ವಿಟಮಿನ್ A ಆಗಿ ಪರಿವರ್ತನೆಯಾಗುತ್ತದೆ. ಇದೇ ಕಾರಣಕ್ಕೆ ಗಜ್ಜರಿಯನ್ನು ಆರೋಗ್ಯಗಳ ಆಹಾರ ಪಟ್ಟಿಯಲ್ಲಿ ಮುಂಚೂಣಿಯಲ್ಲಿ ಇದೆ

ಪ್ರತಿ ದಿನ ಗಜ್ಜರಿ ತಿನ್ನುವುದರಿಂದ ಆಗುವ 10 ಅದ್ಭುತ ಆರೋಗ್ಯ ಲಾಭಗಳು

1. ಕಣ್ಣುಗಳ ಆರೋಗ್ಯಕ್ಕೆ ಗಜ್ಜರಿ ಅತ್ಯುತ್ತಮವಾಗಿದೆ

ಗಜ್ಜರಿ ಎಂದರೆ ಮೊದಲಿಗೆ ನೆನಪಿನಲ್ಲಿ ಬರುವುದು ಕಣ್ಣುಗಳ ಆರೋಗ್ಯ ಗಜ್ಜರಿಯಲ್ಲಿ ಇರುವಂತಹ “ಬೀಟಾ ಕ್ಯಾರೋಟಿನ್” ಎಂಬ ಅಂಶವು ನಮ್ಮ ದೇಹದೊಳಗೆ ಸೇರಿ ವಿಟಮಿನ್ A ಆಗಿ ಪರಿವರ್ತನೆಯಾಗುತ್ತದೆ. ಈ ವಿಟಮಿನ್ ನಮ್ಮ ದೇಹದಲ್ಲಿ ಇರುವಂತಹ ಕಣ್ಣುಗಳ ಆರೋಗ್ಯಕ್ಕೆ ತುಂಬಾ ಉಪಕಾರಿಯಾಗಿದೆ ಮತ್ತು ಸರಿಯಾಗಿ ಕಾರ್ಯನಿರ್ವಹಿಸಲು ಸಹಾಯಕಾರಿಯಾಗಿದೆ

* ರಾತ್ರಿ ವೇಳೆ ಸ್ಪಷ್ಟವಾಗಿ ನೋಡಲು ಸಹಾಯ ಮಾಡುತ್ತದೆ

* ಕಣ್ಣಿನ ಒಣತನವನ್ನು ಕಡಿಮೆ ಮಾಡುತ್ತದೆ

* ವಯಸ್ಸಾದಂತೆ ದೃಷ್ಟಿ ಕುಗ್ಗುವುದನ್ನು ನಿಧಾನಗೊಳಿಸಬಹುದು

* ಕಣ್ಣಿನ ಕೋಶಗಳನ್ನು ರಕ್ಷಿಸುತ್ತದೆ

ಅಂದರೆ, ದಿನನಿತ್ಯ ಸ್ವಲ್ಪ ಗಜ್ಜರಿ ತಿನ್ನುವುದು ಕಣ್ಣುಗಳಿಗೆ ಒಳ್ಳೆಯ ಹೂಡಿಕೆ.

https://timesofindia.indiatimes.com/life-style/food-news/do-you-know-about-these-benefits-of-eating-kaali-gajar/photostory/80200315.cms

 

2. ಚರ್ಮಕ್ಕೆ ನೈಸರ್ಗಿಕ ಹೊಳಪು ನೀಡುತ್ತದೆ

ನಮ್ಮ ಚರ್ಮದ ಆರೋಗ್ಯಕ್ಕೆ ಮತ್ತು ನಮ್ಮ ಆಹಾರ ಪದ್ಧತಿಗೆ ನೇರವಾಗಿ ಸಂಬಂಧಿಸಿದ ಗಜ್ಜರಿ ಈ ವಿಷಯದಲ್ಲಿ ತುಂಬಾ ಪ್ರಯೋಜನಕಾರಿಯಾಗಿದೆ ಗಜ್ಜರಿಯಲ್ಲಿ ಇರುವಂತಹ ಆಂಟಿ ಆಕ್ಸಿಡೆಂಟ್ ಮತ್ತು ವಿಟಮಿನ್ A ಚರ್ಮದ ಕೋಶಗಳನ್ನು ರಕ್ಷಿಸುತ್ತವೆ ಮತ್ತು ಚರ್ಮವನ್ನು ಒಳಗಿನಿಂದಲೇ ಆರೋಗ್ಯವಾಗಿ ಇಡಲು ಸಹಾಯ ಮಾಡುತ್ತವೆ ಪ್ರತಿ ದಿನ ಗಜ್ಜರಿ ತಿನ್ನುವುದರಿಂದ ಆಗುವ 10  ಹೆಚ್ಚು ಅದ್ಭುತ ಆರೋಗ್ಯ ಲಾಭಗಳು

ಗಜ್ಜರಿ ಚರ್ಮಕ್ಕೆ ಹೇಗೆ ಸಹಾಯ ಮಾಡುತ್ತದೆ ಅಂತ ತಿಳಿಯುವುದಾದರೆ ?

* ಮುಖಕ್ಕೆ ನೈಸರ್ಗಿಕ ಕಾಂತಿ ಕೊಡುತ್ತದೆ

* ಒಣಚರ್ಮದ ಸಮಸ್ಯೆ ಕಡಿಮೆಯಾಗಬಹುದು

* ಸೂರ್ಯನ ಕಿರಣಗಳಿಂದಾಗುವ ಹಾನಿಯನ್ನು ತಗ್ಗಿಸಲು ನೆರವಾಗುತ್ತದೆ

* ಮೊಡವೆ, ಮಂಕಾದ ಚರ್ಮದ ಸಮಸ್ಯೆ ಕಡಿಮೆಯಾಗಲು ಸಹಕಾರಿ

ಅದರಲ್ಲೂ ಗಜ್ಜರಿಯನ್ನು ಜ್ಯೂಸ್ ಮತ್ತು ಸಲಾಡ್ ಅಥವಾ ಸಣ್ಣ ತಿಂಡಿಯಾಗಿ ಸೇವಿಸಿದರೆ ಚರ್ಮದ ಮೇಲೆ ಉತ್ತಮ ಪರಿಣಾಮ  ಕಾಣಬಹುದು.

3. ಜೀರ್ಣಕ್ರಿಯೆ ಸುಧಾರಿಸಲು ಸಹಾಯಕವಾಗಿದೆ

ನಮ್ಮ ಹೊಟ್ಟೆ ಸರಿಯಾಗಿ ಇಲ್ಲ ಎಂದರ ನಮ್ಮ ದೇಹವೇ ಸರಿಯಾಗಿಲ್ಲ ಎಂದರ್ಥ ಗಜ್ಜರಿ ನಮ್ಮ ದೇಹದಲ್ಲಿರುವ ಜೀರ್ಣಕ್ರಿಯೆಗೆ ಸಹಕಾರಿಯಾಗಿರುವ ಅತ್ಯುತ್ತಮ ಆಹಾರವಾಗಿದೆ ಅದರಲ್ಲಿ ಇರುವಂತಹ ಫೈಬರ್ ಅಂಶ (ನಾರಿ ಅಂಶ) ಆಹಾರವನ್ನು ಸರಿಯಾಗಿ ಜೀರ್ಣವಾಗಲು ಸಹಕಾರಿ ಆಗುತ್ತದೆ ಜೊತೆಗೆ

* ಮಲಬದ್ಧತೆಯನ್ನು ಕಡಿಮೆ ಮಾಡುತ್ತದೆ

* ಹೊಟ್ಟೆ ಉಬ್ಬರವನ್ನು ತಗ್ಗಿಸುತ್ತದೆ

* ಹೊಟ್ಟೆ ಹಗುರವಾಗಿರಲು ಸಹಾಯ ಮಾಡುತ್ತದೆ

* ಆಂತರಿಕ ಆರೋಗ್ಯವನ್ನು ಉತ್ತಮಗೊಳಿಸುತ್ತದೆ

ಪ್ರತಿದಿನ ಬೆಳಿಗ್ಗೆ ಅಥವಾ ಮಧ್ಯಾಹ್ನದಲ್ಲಿ ಊಟದ ಜೊತೆ ಗಜ್ಜರಿಯ ಸಲಾಡ್ ತಿನ್ನುವುದರಿಂದ ಹೊಟ್ಟೆಯ ಜೀರ್ಣಾಂಗ ವ್ಯವಸ್ಥೆಯಲ್ಲಿ ಉತ್ತಮ ವ್ಯತ್ಯಾಸ ಕಾಣಬಹುದಾಗಿದೆ.

ಪ್ರತಿ ದಿನ ಗಜ್ಜರಿ ತಿನ್ನುವುದರಿಂದ ಆಗುವ 10 ಅದ್ಭುತ ಆರೋಗ್ಯ ಲಾಭಗಳು

 

4. ತೂಕ ನಿಯಂತ್ರಣಕ್ಕೆ ಸಹಕಾರಿಯಾಗಿದೆ

ಇಂದಿನ ಆಧುನಿಕ ಜನ ಜೀವನದಲ್ಲಿ ತೂಕ ಹೆಚ್ಚಳ ಸಾಮಾನ್ಯವಾಗಿ ಕಂಡುಬರುವಂತ ಸಮಸ್ಯೆಯಾಗಿದೆ ಜಿಮ್ ಡಯಟ್ ವರ್ಕೌಟ್ ವ್ಯಾಯಾಮ ಎಲ್ಲವನ್ನು ಮಾಡುತ್ತಿದ್ದರು ಕೆಲವರಿಗೆ ಫಲ ಸಿಗುವುದಿಲ್ಲ ಆದರೆ ಸರಳ ಆಹಾರ ಬದಲಾವಣೆ ಮಾಡುವುದರಿಂದ ಪರಿಹಾರ ಸಿಗುತ್ತದೆ

*ಗಜ್ಜರಿಯು ಕಡಿಮೆ ಕ್ಯಾಲರಿಯನ್ನು ಹೊಂದಿರುತ್ತದೆ

*ಗಜ್ಜರಿಯ ಹೆಚ್ಚು ಫೈಬರ್ ಅಂಶವನ್ನು ಹೊಂದಿರುತ್ತದೆ

*ಗಜ್ಜರಿಯ ಹೊಟ್ಟೆಯ ತುಂಬಿದ ಅಂತ ಅನುಭವ ಕೊಡುತ್ತದೆ

*ಹೊಟ್ಟೆ ಹಸಿದಾಗ ಗಜ್ಜರಿಯ ಜಂಕ್ ಫುಡ್ ತಿನ್ನುವ ಆಸೆಯನ್ನು ಕಡಿಮೆ ಬಿಸ್ಕೆಟ್ ಚಿಪ್ಸ್ ಫಾಸ್ಟ್ ಫುಡ ತಿನ್ನುವ ಬದಲು ಕಚ್ಚಾ ಗಜ್ಜರಿಯ ತುಂಡುಗಳನ್ನು ತಿನ್ನುವುದರಿಂದತೂಕ ನಿಯಂತ್ರವನ್ನು ಸುಲಭವಾಗಿ ಮಾಡಬಹುದು

ಪ್ರತಿ ದಿನ ಗಜ್ಜರಿ ತಿನ್ನುವುದರಿಂದ ಆಗುವ 10 ಅದ್ಭುತ ಆರೋಗ್ಯ ಲಾಭಗಳು

5. ಹೃದಯದ ಆರೋಗ್ಯವನ್ನು ಉತ್ತಮವಾಗಿ ಕಾಪಾಡುತ್ತದೆ ?

ನಮ್ಮ ದೇಹದಲ್ಲಿ ಇರುವ ಅತಿ ಮುಖ್ಯವಾದ ಭಾಗ ಹೃದಯವಾಗಿದೆ. ಹೃದಯದ ಆರೋಗ್ಯಕ್ಕೆ ಗಜ್ಜರಿಯ ಅತಿ ಮುಖ್ಯವಾದ ಆಹಾರವಾಗಿದೆ ಮತ್ತು ಮತ್ತು ಗಜ್ಜರಿಯಲ್ಲಿ ಇರುವಂತಹ ಕೆಲವು ಪೌಷ್ಟಿಕಾಂಶಗಳು ಹೃದಯಕ್ಕೆ ಸಹಕಾರಿಯಾಗಿದೆ.

ಗಜ್ಜರಿ ಹೃದಯಕ್ಕೆ ಹೇಗೆ ಒಳ್ಳೆಯದು?

* ಗಜ್ಜರಿಯಲ್ಲಿ ಇರುವಂತಹ ರಕ್ತದ ಒತ್ತಡವನ್ನು ಸಮತೋಲನದಲ್ಲಿ ಇರಿಸುವಲ್ಲಿ ಸಹಾಯ ಮಾಡುತ್ತದೆ

* ಆಂಟಿ ಆಕ್ಸಿಡೆಂಟ್ ಗಳು ದೇಹದಲ್ಲಿ ಇರುವಂತಹ ಉರಿತಗಳನ್ನು ಕಡಿಮೆ ಮಾಡುತ್ತವೆ.

* ಗಜ್ಜರಿಯಲ್ಲಿ ಇರುವಂತಹ ಫೈಬರ್ ಕೊಲೆಸ್ಟ್ರಾಲ್ ಅಂಶವನ್ನು ನಿಯಂತ್ರಣಕ್ಕೆ ತರಲು ಸಹಕಾರಿಯಾಗಿದೆ.

ಹೃದಯದ ಆರೋಗ್ಯ ಕಾಪಾಡಲು ದುಬಾರಿ ಆಹಾರಗಳೇ ಬೇಕೆಂದೇನಿಲ್ಲ ಗಜ್ಜರಿ ಸರಳ ಆಹಾರ ಪದ್ಧತಿಯಾಗಿದೆ

6. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು

ನಮ್ಮ ದೇಹಕ್ಕೆ ರೋಗಗಳ ವಿರುದ್ಧ ಹೋರಾಡಲು ಶಕ್ತಿ ಇರಬೇಕು ಅದಕ್ಕಾಗಿಯೇ ಇಮ್ಯೂನಿಟಿ ಪವರ್ ತುಂಬಾ ಮುಖ್ಯ. ಗಜ್ಜರಿಯಲ್ಲಿ ಇರುವಂತಹ ವಿಟಮಿನ್ A, ವಿಟಮಿನ್ ಸಿ, ಮತ್ತು ಆಂಟಿ ಆಕ್ಸಿಡೆಂಟ್ಸ್ ದೇಹದ ರೋಗನಿರೋಧಕ ಶಕ್ತಿಯನ್ನು ಉತ್ತಮ ಪಡಿಸಲು ಸಹಾಯಕವಾಗಿದೆ. ವಿಶೇಷವಾಗಿ ಅದರಲ್ಲಿಯೂ ಮಹಿಳೆಯರ ಋತು ಬದಲಾವಣೆ ಸಮಯದಲ್ಲಿ ಸೀತ ಕೆಮ್ಮು ನೆಗಡಿ ಮುಂತಾದ ಸಮಸ್ಯೆಗಳನ್ನು ಎದುರಿಸುವಲ್ಲಿ ಉತ್ತಮ ಆಹಾರ ಪದ್ಧತಿ ಮುಖ್ಯವಾಗಿದೆ. ಅದರಲ್ಲಿಯೂ ಗಜ್ಜರಿಯನ್ನು ಸೇರಿಸುವುದು ಮುಖ್ಯವಾಗಿದೆ.

7. ರಕ್ತದ ಆರೋಗ್ಯಕ್ಕೆ ಸಹಕಾರಿಯಾಗಿದೆ ಗಜ್ಜರಿಯಲ್ಲಿ ಇರುವಂತಹ ಕೆಲವು ಪೋಷಕಾಂಶಗಳು ನಮ್ಮ ದೇಹದಲ್ಲಿ ಇರುವಂತಹ ರಕ್ತದ ಗುಣಮಟ್ಟವನ್ನು ಸುಧಾರಿಸಲು ಸಹಾಯಕಾರಿಯಾಗಿದೆ. ಇದು ನೇರವಾಗಿ ರಕ್ತವನ್ನು ಹೆಚ್ಚಿಸುತ್ತದೆ ಎಂದು ಹೇಳದಿದ್ದರೂ ನಮ್ಮ ದೇಹದಲ್ಲಿ ಸಮಗ್ರ ಆರೋಗ್ಯದಲ್ಲಿ ಗಜ್ಜರಿಯ ಪರಿಣಾಮ ತುಂಬಾ ಇದೆ

ವಿಶೇಷವಾಗಿ

* ಗಜ್ಜರಿ ದೇಹದ ಶಕ್ತಿಯನ್ನು ಬೆಂಬಲಿಸುತ್ತದೆ

*ಪೋಷಕಾಂಶಗಳ ಶೋಷಣೆಗೆ ಸಾಹಾಯಕಾರಿಯಾಗಿದೇ

*ನರಗಳ ದೌರ್ಬಲ್ಯವನ್ನು ಕಡಿಮೆ ಮಾಡಲು ಸಹಾಯಕಾರಿಯಾಗಿದೆ .

ಹೀಗಾಗಿ ಗಜ್ಜರಿಯನ್ನು ನೈಸರ್ಗಿಕ ಶಕ್ತಿದಾಯಕ ಆಹಾರವಾಗಿದೆ ಎಂದು ಹೇಳಬಹುದು.

8. ಮೆದುಳಿನ ಆರೋಗ್ಯಕ್ಕೂ ತುಂಬಾ ಒಳ್ಳೆಯದು

ನಾವು ದಿನದ ದಿನನಿತ್ಯ ತಿನ್ನುವ ಆಹಾರ ನಮ್ಮ ಮನಸ್ಸು ಏಕಾಗ್ರತೆ ಮತ್ತು ಮೆದುಳಿನ ಕಾರ್ಯ ಕ್ಷಮತೆಯ ಮೇಲೆ ತುಂಬಾ ಪರಿಣಾಮ ಬೀರುತ್ತದೆ.

ಗಜ್ಜರಿಯಲ್ಲಿ ಇರುವ ಆಂಟಿ ಆಕ್ಸಿಡೆಂಟ್‌ಗಳು

*ಗಜರಿಯ ದೇಹದ ಕೋಶಗಳನ್ನು ರಕ್ಷಿಸುತ್ತದೆ.

*ಮೆದುಳಿನ ಕಾರ್ಯಕ್ಷಮತೆಗೆ ಬೆಂಬಲಿಸುತ್ತದೆ

* ದೇಹದಲ್ಲಿ ಇರುವ ಒತ್ತಡವನ್ನು ಕಡಿಮೆ ಮಾಡಲು ಸಹಾಯಕಾರಿಯಾಗಿದೆ.

ಪ್ರತಿ ದಿನ ಗಜ್ಜರಿ ತಿನ್ನುವುದರಿಂದ ಆಗುವ 10 ಅದ್ಭುತ ಆರೋಗ್ಯ ಲಾಭಗಳು
ಪ್ರತಿ ದಿನ ಗಜ್ಜರಿ ತಿನ್ನುವುದರಿಂದ ಆಗುವ

ವಿದ್ಯಾರ್ಥಿಗಳು ಮತ್ತು ಉದ್ಯೋಗದಲ್ಲಿರುವ ಮತ್ತು ಹೆಚ್ಚು ಮಾನಸಿಕ ಒತ್ತಡದಲ್ಲಿ ಇರುವಂತಹವರು ಆಹಾರದಲ್ಲಿ ಗ ಜ್ಜರೆಯನ್ನು ಸೇರಿಸಿಕೊಂಡರೆ ಉತ್ತಮ ಆರೋಗ್ಯ ಪಡೆಯಬಹುದು

9. ಗಜ್ಜರಿ ಎಲುಬುಗಳಿಗೆ ಸಹ ಉಪಯುಕ್ತವಾಗಿದೆ

ಗಜ್ಜರಿಯಲ್ಲಿ ಇರುವಂತಹ ವಿಟಮಿನ್ K ಮತ್ತು ಕೆಲವು ಖನಿಜಾಂಶಗಳು ನಮ್ಮ ದೇಹದಲ್ಲಿ ಇರುವಂತಹ ಮೂಳೆಗಳ ಆರೋಗ್ಯಕ್ಕೆ ಸಹಾಯಕಾರಿಯಾಗಿದೆ ಪ್ರತಿ ದಿನ ಗಜ್ಜರಿ ತಿನ್ನುವುದರಿಂದ ಆಗುವ 10 ಹೆಚ್ಚು ಲಾಭಗಳು

ಇದು: * ಎಲುಬುಗಳ ಬಲವರ್ಧನೆಗೆ ನೆರವಾಗಬಹುದು

* ದೇಹದ ಸಮತೋಲನ ಕಾಯ್ದುಕೊಳ್ಳಲು ಸಹಕಾರಿಯಾಗಬಹುದು

* ವಯಸ್ಸಾದಂತೆ ಎಲುಬುಗಳ ದುರ್ಬಲತೆಯನ್ನು ತಗ್ಗಿಸಲು ಸಹಾಯ ಮಾಡಬಹುದು

ವಿಶೇಷವಾಗಿ ಮಕ್ಕಳು, ಮಹಿಳೆಯರು ಮತ್ತು ಹಿರಿಯರು ಗಜ್ಜರಿ ಸೇವಿಸುವುದು ಉತ್ತಮ.

10. ಡಿಟಾಕ್ಸ್ ಆಹಾರವಾಗಿ ಗಜ್ಜರಿ

ನಮ್ಮ ದೇಹದಲ್ಲಿ ಪ್ರತಿದಿನ ಅನೇಕ ವಿಧದ ಆಹಾರ, ಮಾಲಿನ್ಯ, ಒತ್ತಡ, ಕಡಿಮೆ ನಿದ್ರೆ ಇತ್ಯಾದಿಗಳ ಪರಿಣಾಮಗಳು ಜಮೆಯಾಗುತ್ತವೆ. ಈ ಸಂದರ್ಭಗಳಲ್ಲಿ ದೇಹವನ್ನು ಹಗುರಗೊಳಿಸುವ ಆಹಾರ ಮುಖ್ಯ.

ಗಜ್ಜರಿ

* ದೇಹವನ್ನು ಒಳಗಿನಿಂದ ಸ್ವಚ್ಛಗೊಳಿಸಲು ನೆರವಾಗಬಹುದು

* ಜೀರ್ಣಕ್ರಿಯೆಯನ್ನು ಸರಾಗಗೊಳಿಸುತ್ತದೆ

* ಲಿವರ್ ಕಾರ್ಯಕ್ಷಮತೆಯನ್ನು ಬೆಂಬಲಿಸುತ್ತದೆ

* ದೇಹಕ್ಕೆ ಹಸಿವು ಮತ್ತು ಚೈತನ್ಯ ಕೊಡುತ್ತದೆ

ಆದ್ದರಿಂದ ಹಲವರು ಡೆಟಾಕ್ಸ್ ಜ್ಯೂಸ್‌ಗಳಲ್ಲಿ ಗಜ್ಜರಿಯನ್ನು ಬಳಸುತ್ತಾರೆ.

ಗಜ್ಜರಿ ತಿನ್ನುವ ಉತ್ತಮ ವಿಧಾನಗಳು

ಕಚ್ಚಾ ಗಜ್ಜರಿ ತುಂಡುಗಳಾಗಿ

ಸಲಾಡ್ ರೂಪದಲ್ಲಿ

ಗಜ್ಜರಿ ಜ್ಯೂಸ್ ಆಗಿ

ಗಜ್ಜರಿ ಪಲ್ಯ/ಸಾಂಬಾರ್ ನಲ್ಲಿ

ಗಜ್ಜರಿ ಸೂಪ್ ಆಗಿ

ಗಜ್ಜರಿ ಹಲ್ವಾ (ಮಿತವಾಗಿ)

ಸ್ಯಾಂಡ್‌ವಿಚ್ ಅಥವಾ ಉಪ್ಮಾ ಅಲ್ಲಿ ಸೇರಿಸಿ

ಹೀಗೆ ಬೇರೆ ಬೇರೆ ರೂಪದಲ್ಲಿ ತಿಂದರೆ ರುಚಿಯೂ ಇರುತ್ತದೆ, ಆರೋಗ್ಯವೂ ಸಿಗುತ್ತದೆ.

ಗಜ್ಜರಿ ಯಾವ ಸಮಯದಲ್ಲಿ ತಿನ್ನುವುದು ಉತ್ತಮ?

ಗಜ್ಜರಿ ತಿನ್ನಲು ವಿಶೇಷ ಸಮಯದ ಅವಶ್ಯಕತೆ ಇಲ್ಲ. ಆದರೆ ಕೆಲವು ಸಮಯಗಳಲ್ಲಿ ಹೆಚ್ಚು ಪ್ರಯೋಜನ ಕಾರಿಯಾಗಬಹುದು.

ಉತ್ತಮ ಸಮಯ

* ಬೆಳಿಗ್ಗೆ ಖಾಲಿ ಹೊಟ್ಟೆಗೆ (ಮಿತವಾಗಿ)

* ಬ್ರೇಕ್‌ಫಾಸ್ಟ್ ಜೊತೆ

* ಮಧ್ಯಾಹ್ನದ ಊಟದ ಸಲಾಡ್‌ನಲ್ಲಿ

* ಸಂಜೆ ಆರೋಗ್ಯಕರ ಸ್ನ್ಯಾಕ್ ಆಗಿ

ಜ್ಯೂಸ್ ಕುಡಿಯುವುದಕ್ಕಿಂತ, ಕಚ್ಚಾಗಿ ಅಥವಾ ಸಲಾಡ್ ರೂಪದಲ್ಲಿ ತಿನ್ನುವುದು ಫೈಬರ್‌ಗಾಗಿ ಹೆಚ್ಚು ಒಳ್ಳೆಯದು.

ಪ್ರತಿ ದಿನ ಎಷ್ಟು ಗಜ್ಜರಿ ತಿನ್ನಬಹುದು?

ಸಾಮಾನ್ಯವಾಗಿ:

* ದಿನಕ್ಕೆ 1 ರಿಂದ 2 ಮಧ್ಯಮ ಗಾತ್ರದ ಗಜ್ಜರಿ ತಿನ್ನುವುದು ಸಾಕಷ್ಟು

* ಜ್ಯೂಸ್ ರೂಪದಲ್ಲಿ ಕುಡಿಯುವಾಗ ಮಿತವಾಗಿ ತೆಗೆದುಕೊಳ್ಳುವುದು ಉತ್ತಮ

ಅತಿ ಹೆಚ್ಚು ಸೇವಿಸುವುದು ಯಾವ ಆಹಾರಕ್ಕೂ ಸರಿಯಲ್ಲ. ಆದ್ದರಿಂದ ಗಜ್ಜರಿಯನ್ನೂ ಮಿತಿಯಲ್ಲಿ ತಿನ್ನುವುದು ಮುಖ್ಯ.

ಪ್ರತಿ ದಿನ ಗಜ್ಜರಿ ತಿನ್ನುವುದರಿಂದ ಆಗುವ ಅದ್ಭುತ ಆರೋಗ್ಯ ಲಾಭಗಳು ಹೆಚ್ಚು

ಗಜ್ಜರಿ ತಿನ್ನುವಾಗ ಗಮನಿಸಬೇಕಾದ ವಿಷಯಗಳು

ಗಜ್ಜರಿ ತುಂಬಾ ಆರೋಗ್ಯಕರವಾದರೂ ಕೆಲವು ಸರಳ ವಿಚಾರಗಳನ್ನು ಗಮನಿಸಿದರೆ ಇನ್ನೂ ಉತ್ತಮ.

ಗಮನಿಸಬೇಕಾದವು:

* ಚೆನ್ನಾಗಿ ತೊಳೆದು ತಿನ್ನಿ

* ಕಚ್ಚಾ ತಿನ್ನುವಾಗ ಸ್ವಚ್ಛವಾಗಿರಲಿ

* ಸಕ್ಕರೆ ಸೇರಿಸಿದ ಜ್ಯೂಸ್‌ಗಳನ್ನು ತಪ್ಪಿಸಿ

* ಒಂದೇ ಆಹಾರಕ್ಕೆ ಮಾತ್ರ ಅವಲಂಬಿಸದೆ ಸಮತೋಲನ ಆಹಾರ ತೆಗೆದುಕೊಳ್ಳಿ

ಕೊನೆಯ ಮಾತು

ಸಣ್ಣದಾಗಿ ಕಾಣುವ ಗಜ್ಜರಿಯೊಳಗೆ ದೊಡ್ಡ ಆರೋಗ್ಯ ರಹಸ್ಯ ಅಡಗಿದೆ. ದಿನನಿತ್ಯ ಗಜ್ಜರಿ ತಿನ್ನುವ ಅಭ್ಯಾಸ ಬೆಳೆಸಿಕೊಂಡರೆ ಕಣ್ಣು, ಚರ್ಮ, ಹೊಟ್ಟೆ, ಹೃದಯ, ತೂಕ ನಿಯಂತ್ರಣ, ರೋಗನಿರೋಧಕ ಶಕ್ತಿ — ಹೀಗೆ ಅನೇಕ ಆರೋಗ್ಯ ಲಾಭಗಳನ್ನು ಪಡೆಯಬಹುದು.ಆರೋಗ್ಯ ಕಾಪಾಡಲು ಯಾವಾಗಲೂ ದುಬಾರಿ ಆಹಾರವೇ ಬೇಕೆಂದಿಲ್ಲ. ಕೆಲವೊಮ್ಮೆ ನಮ್ಮ ಅಡುಗೆಮನೆಯಲ್ಲಿ ಇರುವ ಸರಳ ತರಕಾರಿಯೇ ದೊಡ್ಡ ಔಷಧಿ ಆಗಬಹುದು. ಗಜ್ಜರಿ ಅಂತಹ ಒಂದು ಅದ್ಭುತ ಆಹಾರ.

ಹೀಗಾಗಿ ಇಂದಿನಿಂದಲೇ ನಿಮ್ಮ ದಿನನಿತ್ಯದ ಆಹಾರ ಪಟ್ಟಿಯಲ್ಲಿ ಗಜ್ಜರಿಗೆ ಒಂದು ವಿಶೇಷ ಸ್ಥಾನ ನೀಡಿ ಸಣ್ಣ ಅಭ್ಯಾಸ, ದೊಡ್ಡ ಲಾಭ!

https://kannadanewsguru.com/indian-territorial-army-recruitment/

 

1 thought on “ಪ್ರತಿ ದಿನ ಗಜ್ಜರಿ ತಿನ್ನುವುದರಿಂದ ಆಗುವ 10 ಅದ್ಭುತ ಆರೋಗ್ಯ ಲಾಭಗಳು”

Leave a Comment